ಮಹಾಜನ ವರದಿ - ಬೆಳಗಾವಿ
ರಾಜ್ಯ ಪುನರ್ವಿಂಗಡನೆ ನಂತರ ಹುಟ್ಟಿದ ಗಡಿವಿವಾದ , ಪರಿಹಾರಕ್ಕೆ ಮಹಾ ರಾಷ್ಟ್ರ ತೀರಾ ಒತ್ತಡ ತಂದಿತ್ತು . ಕರ್ನಾಟಕವು ತನಗೆ ಬರಬೇಕಿದ್ದ ಕಾಸರಗೋಡು , ಮಡಕಷಿರ , ತಲ್ವಾಡಿ , ಮುಂತಾದ ಪ್ರದೇಶ ಗಳ ಬಗ್ಗೆ ತಕರಾರು ಮಾಡುತ್ತಲಿತ್ತು . ಮಹಾರಾಷ್ಟ್ರ ತೀರಾ ಒತ್ತಾಯ ತಂದಾಗ ೨೫. ೧೦ ೧೯೬೬ ರಲ್ಲಿ ಮೆಹರ್ ಚಂದ ಮಹಾಜನ್ ಆಯೋಗ ನೇಮಿಸಿತು . ೧೯೬೭ ರಲ್ಲಿ ಆಯೋಗವು ವರದಿ ಒಪ್ಪಿಸಿತು . " ಆಯೋಗದ ವರದಿ ಹೇಗಿದ್ದರು ಅದಕ್ಕೆ ನಾವು ಒಪ್ಪುತ್ತೇವೆ " ಎಂದು ಮಹಾರಾಷ್ಟ್ರ ಸರ್ಕಾರ ೧೪. ೯. ೧೯೬೭ ರಲ್ಲಿ ಹೇಳಿತು.
ಆಯೋಗವು ತನ್ನ ವರದಿಯಲ್ಲಿ
೧. ಉತ್ತ್ರರ ಕನ್ನಡ ಜಿಲ್ಲೆ ಯಲ್ಲಿ ತನಗೆ ಬರಬೇಕೆಂದು ಒತ್ತಾಯಿಸಿದ ಪ್ರದೇಶಗಳ ಹಕ್ಕನ್ನು ತಿರಸ್ಕರಿಸಿತು
೨. ಮಹಾರಾಷ್ಟ್ರ ಬೇಡಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ , ತಾಲೂಕಿನ ೨೦೬ ಗ್ರಾಮ ಗಳಲ್ಲಿ ಪಶ್ಚಿಮ ದ ೧೫೨ ಗ್ರಾಮ , ಬೆಳಗಾವಿ ತಾಲೂಕಿನ ೮೪ ಗ್ರಾಮ ,ಚಿಕ್ಕೊಡಿ ತಾಲೂಕಿನ ೪೧ ಗ್ರಾಮಗಳು , ನಿಪ್ಪಾಣಿ ಸಹಿತ ೩೨ ಗ್ರಾಮಗಳು ,ಇವುಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಒಪ್ಪಿತು . ಹುಕ್ಕೇರಿ ತಳುಕಿನ ೧೮ ಗ್ರಾಮ ಮತ್ತು ಅಥಣಿ ತಳುಕಿನ ೧೦ ಗ್ರಾಮಗಳ ಬಗೆಗಿನ ಬೇಡಿಕೆ ತಿರಸ್ಕರಿಸಿತು .
೩. ಬೀದರ ಜಿಲ್ಲೆಯ ೧೪೬ ಗ್ರಾಮಾಗಳ ಬಗ್ಗೆ ಮಹಾರಾಷ್ಟ್ರ ಮಂಡಿಸಿದ್ದ ಹಕ್ಕನ್ನು ತಿರಸ್ಕರಿಸಿತು
೪. ಗುಲಬರ್ಗ ಜಿಲ್ಲೆ ಯಾ ಅಳಂದ ತಾಲೂಕಿನ ಬಗ್ಗೆ ಮಂಡಿಸಿದ್ದ ಬೇಡಿಕೆ ತೆರಸ್ಕರಿಸಿತು
ಕರ್ನಾಟಕ ದ ಬೇಡಿಕೆಯಾದ ಮಹಾರಾಷ್ಟ್ರದ ಸೊಲ್ಲಾಪುರ ತಳುಕಿನ ೧ ಇಡೀ , ಅಕ್ಕಲ ಕೋಟೆ ತಾಲೂಕು .. ದಕ್ಷಿಣ ಸೊಲ್ಲಾಪುರ ತಳುಕಿನ ೬೫ ಗ್ರಾಮಗಳು .ಸಾಂಗ್ಲಿ . ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ೪೪ ಗ್ರಾಮಗಳು . ಜಿಲ್ಲೆಯ ಗಡಹಿಂಗ್ಲನ ತಳುಕಿನ ೧೫ ಗ್ರಾಮಗಳು ಕರ್ನಾಟಕ ಕ್ಕೆ ವರಗಾಯಿಸಬೇಕೆನ್ದು ಒಪ್ಪಿಗೆ ನೀಡಿ , ಮಹಾರಾಷ್ಟ್ರ ದಿಂದ ಕರ್ನಾಟಕ ಕ್ಕೆ ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆ ಮತ್ತು ಶಿರೋಲ ತಾಲೂಕಿನ ೧೫ ಗ್ರಾಮ ಗಳ ವರ್ಗಾವಣೆಗೆ ಆಯೋಗ ಒಪ್ಪಲ್ಲಿಲ. ಕೇರಳ ದಲ್ಲಿರುವ ಕಾಸರಗೋಡು ತಾಲೂಕಿನ ೭೧೨ ಗ್ರಾಮ ಕರ್ನಾಟಕಕ್ಕೆ ಒಪ್ಪಿಸಲು ಶಿ ಪಾರಸ್ಸು ಮಾಡಿತು
No comments:
Post a Comment